ಗಜಾನನ ಸ್ತುತಿ

ಶ್ರೀ ಗಿರಿಜಾಸುತ ಗಜಾನನ ಧೃಡವಾಗಿ ಭಜಿಪೆವು ಕುಮಾರನ | 1. ಲಂಬೋದರ ಹೇರಂಬ ಸುರಾರ್ಚಿತ ಶಂಭು ಕುಮಾರ ವಿನಾಯಕ || 1 || 2. ಮಣಿಮಯ ಕುಂಡಲ ಮುಕುಟ ಕಂಕಣಧರ ಕುಣಿದಾಡುತ ಬಾರೋ ವಿನಾಯಕ || 2 || 3. ಪರಶು ಪಾಶಾಂಕುಶಧರ ವಿಘ್ನೇಶ್ವರ ಗುರು ಮೂರುತಿ ಬಾರೋ ಗಣಾಧಿಪ || 3 || ಭಗವನ್ನಾಮ ಸಂಕೀರ್ತನಂ || ಗೋವಿಂದ ಗೋವಿಂದ ||

ಶಾರದಾ ಸ್ತುತಿ

ಶಾರದಾಂಬ ನಿನ್ನ ನಂಬಿದೆವೈ | ಭವಸಾರಸಾಕ್ಷಿಯೆ ಶಾರದಾಂಬ ನಿನ್ನ ನಂಬಿದೆವೈ || 1. ವಾಣಿ ಕೋಕಿಲ ವೇಣಿ ಪನ್ನಗ, ವಾಣಿ ಬ್ರಹ್ಮನ ರಾಣಿ ವಾಣಿಯೆ ವೀಣಾಂಕ ಹಸ್ತೆಯೆ ಸಾರುತ್ತ ಶಶಿ ಮುಖಿ || 1 || || ಶಾರದಾಂಬ || 2. ನಾರಿ ಮಣಿಯರು ಸೇರಿ ನಿನ್ನನು ಸಾರಿ ಕರೆಯುವರೆ ನೀರಾಬ್ಜ ಪೀಠಕೆ ಸಾರುತ್ತ ಶಶಿಮುಖಿ || 2 || || ಶಾರದಾಂಬ || 3. ಸೃಷ್ಟಿಗಧಿಕ ಶೃಂಗೇರಿ ಪುರದೊಳು ಸೃಷ್ಟಿಕರ್ತನ ಪಟ್ಟದರಸಿಯೆ ಹಸ್ತಾದಿಂಪುಸ್ತಕ ಶಿಸ್ತಿನಿಂಪಿಡಿದಿಹೆ || 3 || || ಶಾರದಾಂಬ || || ಅಂಬಾ ಸ್ಮರಣೆ ಗೋವಿಂದ - ಗೋವಿಂದ ||

ಆಂಜನೇಯ ಸ್ತುತಿ

1. ಸ್ವಾಮಿ ಮುಖ್ಯ ಪ್ರಾಣ ನೀ ಪಿಡದಿಹ ರಾಮರ ಬಾಣ ಸರ್ವಾ ವಿದ್ಯ ಪ್ರವೀಣ ನಿನ್ನ ಮರೆವರ ಗಂಟಲ ಗಾಣ || 2. ಏಕಾದಶಾಯ ರುದ್ರಾ ನೀ ಪಿಡದಿಹೆ ರಾಮರ ಮುದ್ರಾ ಸೇತುವೆ ಕಟ್ಟಿ ಸಮುದ್ರ ನೀ ಅಹುದಹುದೊಬಲ ಭದ್ರಾ || 1 || 3. ಸಂಜೀವನ ಪರ್ವತವ ನೀ ಅಂಜದೆ ತಂದೆಯೋ ಧೀರಾ ಅಂಜನ ಸುತನೇ ನಿನ್ನ ಸ್ವಾಮಿ ಬೇಡಿಕೊಂಬೆನು ಮುನ್ನಾ || 2 || 4. ವೈಕುಂಠ ಸ್ಥಳದಿಂದ ಬಂದೂ ನೀ ಹಂಪೆ ಕ್ಷೇತ್ರದಿ ನಿಂದೂ ಯಂತ್ರೋದ್ಧಾರಕನೆಂದೂ ಸ್ವಾಮಿ ಪುರಂದರ ವಿಠಲನೆ ಸಲಹೆಂದೂ || 3 || || ಆಂಜನೇಯ ವರದ ಗೋವಿಂದ - ಗೋವಿಂದ ||

ರಾಮಚಂದ್ರ ಸ್ತುತಿ

ಶ್ರೀ ರಘುವರ ಶುಭಕರ ವರದಾಯಕ ಕರ ವರದಾಯಕ ಸೀತಾನಾಯಕ ಮಾಂ ಪಾಹೀ ಇಂದಿರಪತಿ ದಶಸ್ಕಂದನ ಮರ್ದನ ಬಂಧ ವಿಮೋಚನ ಬಹುಶೂರಾ ಕಂದರ್ಪಾಪಿತ ಮಂದರ ಗಿರಿಧರ ಸಿಂಧು ಶಯನ ಸದ್ಗುಣ ಸಾಂದ್ರ || 1 || || ಪ || ದೀನ ಜನಾವನ ದಾನವ ಮರ್ದನ ಭಾನುಕುಲಾಂಭೋ ನಿಧಿ ಚಂದ್ರ ಜಾನಕಿ ವರ ಪವಮಾನ ಸುರಾರ್ಚಿತ ಜ್ಞಾನ ದಾಯಕ ಸದ್ಗುಣ ಸಾಂದ್ರಾ || 2 || || ಪ || ಸುರಚಿರ ಸುರಚಿರ ಮುಕುಟ ವಿರಾಜಿತ ಕರುಣಾರುಣ ಚರಣೋಜ್ವಲಿತ || ಕರುಣಾ ಸಾಗರ ಪರಮ ದಯಾಕರ ನರಸಿಂಹ ದಾಸ ಪೊರೆ ಎನ್ನುತಾ || 3 || || ಪ ||

ಶ್ರೀ ಸದ್ಗುರು ಸ್ತುತಿ

ಶ್ರೀ ಗುರುನಾಥ ಸದ್ಗುರುನಾಥ ಮೀಯಪರಾಧಿಯಾಪರದ || ಮೀಯಪರಾಧಿ ಪರಾತ್ಪರಂತು ಕಾಯೋ ಹೇ ಗುರುರಾಯ || ಶಂಕರ ಗುರುವರ ಗುರುಮಹರಾಜ ಕಿಂಕರ ಪಾಲಯ ಗುರುಮಹರಾಜ || ಗುರುಮಹರಾಜ ಗುರುಮಹರಾಜ ಗುರುಮಹರಾಜ ಗುರುಮಹರಾಜ ಬ್ರಹ್ಮ ಚೈತನ್ಯ ಗುರುಮಹರಾಜ ಬ್ರಹ್ಮಾನಂದ ಗುರುಮಹರಾಜ || ವಾಣಿ ಬ್ರಹ್ಮ ಗುರುಮಹರಾಜ ಕರುಣಾ ಸಿಂಧು ಗುರುಮಹರಾಜ || ದೀನದಯಾಳೋ ಗುರುಮಹರಾಜ ದೀನದಯಾಳೋ ಗುರುಮಹರಾಜ || ಪತಿತ ಪಾವನ ಗುರುಮಹರಾಜ ಪತಿತ ಪಾವನ ಗುರುಮಹರಾಜ ಅನಾಥನಾಥ ಗುರುಮಹರಾಜ ಅನಾಥನಾಥ ಗುರುಮಹರಾಜ ಶಂಭೋಶಂಕರ ಗುರುಮಹರಾಜ ಶಂಭೋಶಂಕರ ಗುರುಮಹರಾಜ ಸೀತಾರಾಮ ಗುರುಮಹರಾಜ ಸೀತಾರಾಮ ಗುರುಮಹರಾಜ || ರಾಮರೂಪ ಗುರುಮಹರಾಜ ರಾಮದಾಸ ಗುರುಮಹರಾಜ ಗುರುಮಹರಾಜಕೀ ಜೈ ಜೈ ಸದ್ಗುರು ಬ್ರಹ್ಮ ಚೈತನ್ಯ ಜೈ ಸದ್ಗುರು ಗುರುಮಹರಾಜ್ ಕೀ || ಜೈ ಸದ್ಗುರು ಸಮರ್ಥ ||

ಹರಿ ಹರ ಸ್ಮರಣೆ

ಸಾಂಬಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣ ಯುಗಂ | ಶಿವ ಶಿವ ಶಿವ ಶಿವ ಶಂಭೋ ಶಂಕರ ಶರಣಂ ಮೇ ತವ ಚರಣ ಯುಗಂ | ಭಜನಕ ರಾಹೋ ರಾಮಾ ಹೇ ಸಾರ್ಥಕ ಹೋಹಿಲ ಜನ್ಮಾ ಹೇ | ಕರುಣಿಸು ರಾಮಾ ಮೊರೆಯಿಡುವೆ ಪೊರೆವರ ಕಾಣೆನು ದಯಾಳುವೆ. ನಿನ್ನನು ಭಜಿಸುವೆ ರಘುರಾಮಾ ಎನ್ನನು ಪೊರೆಯೋ ಗುಣಧಾಮಾ ರಾಧಾಕೃಷ್ಣ ಜಯ ಕುಂಜ ವಿಹಾರೀ ಮುರಳೀಧರ ಗೋವರ್ಧನ ಧಾರೀ ಶಂಖು ಚಕ್ರ ಪೀತಾಂಬರ ಧಾರೀ ಕರುಣಾಕರ ಶ್ರೀ ಕೃಷ್ಣ ಮುರಾರೀ ಅಖಂಡ ರಾಮ್ ಆನಂದ ರಾಮ್ ಚಿನ್ಮಯ ರಾಮ್ ಚಿದ್ರೂಪ ರಾಮ್ ಅಖಂಡ ರಾಮ್ ರಾಮ್ ಆನಂದ ರಾಮ್ ರಾಮ್ ಚಿನ್ಮಯ ರಾಮ್ ರಾಮ್ ಚಿದ್ರೂಪ ರಾಮ್ ರಾಮ್ ಸೀತಾಪತೇ ದಾಶರಥೇ ರಾಮ ದಶರಥ ನಂದನ ದಯಾ-ನಿಧೇ ರಾಧಾಪತೇ ಪಾರ್ಥಸಖೇ ಕೃಷ್ಣ ದೇವಕಿ ನಂದನ ದಯಾನಿಧೇ ನಾರಾಯಣಾ ನಾರಾಯಣಾ ನಾರಾಯಣಾ ಹರಿ ನಾರಾಯಣಾ ನಾರಾಯಣಾ ನಾರಾಯಣಾ ಪಾಹಿ ಲೀ ಗೋಪನ್ ಕೃಪಾಧನ ಶಂಭೋ ಶಂಕರ ಗೌರೀಶಾ ಶಾಂತ ದಯಾಪರ ವಿಶ್ವೇಶಾ ವಾಣಿ ಪತೇ ಬ್ರಹ್ಮ ಗೌರೀ ಪತೇ ಶಂಭೋ ಲಕ್ಷ್ಮೀಪತೇ ಭಗವಾನ್ ನಾರಾಯಣಾ ಗೋವಿಂದ ರಾಧೇ ರಾಮ್ ರಾಮ್ ರಾಮ್ ಗೋಪಾಲ ರಾಧೇ ಸೀತಾರಾಮ್ ರಾಮ್ ರಾಮ್ ರಾಮ್ ರಾಮ್ ಭಜರೆ ಮನಾ ಸೀತಾರಾಮ್ ಸೀತಾರಾಮ್ ಭಜರೆ ಮನಾ || ಜೈ ಜಾನಕೀ ಕಾಂತ ಸ್ಮರಣೇ || || ಜೈ ಜೈ ರಾಮ್ ||

ರಾಮನಾಮ ಸ್ಮರಣೆ

ರಾಮ ರಾಮ ರಾಮ ಸೀತಾ ರಾಮ ರಾಮ ಎನ್ನಿರೋ ರಾಮ ಸ್ಮರಣೆ ಹೊರತು ವ್ಯರ್ಥ ಕಾಲ ಕಳೆಯ ಬೇಡಿರೋ 1. ಕಲ್ಲು ಮರಗಳ ಕಾಡಿನೊಳಗೆ ತಿರುಗಿ ತೊಳಲಿ ಬಳಲುವಾಗ ಅಲ್ಲಿ ಬಹುದೆ ಜ್ಞಾನ ನಮಗೆ ಪದ್ಮನಾಭನ ಸ್ಮರಣೆಯು || || ರಾಮ || 2. ಕೆಟ್ಟ ಜನ್ಮದಲ್ಲಿ ಹುಟ್ಟಿ ದುಷ್ಟಕರ್ಮವೆಷ್ಟುಮಾಡಿ ದೇಹ ಬಿಟ್ಟು ಹೋಗುವಾಗ ರಾಮ ಭಜನೆಯು ಬಾರದೈ || || ರಾಮ || 3. ಪರರ ನಾರೀ ಪರರ ದ್ರವ್ಯ ನರಕವೆಂದು ತಿಳೀಯಿರೋ ಪರರ ನಿಂದೆ ಪರರ ಸಂಘವ ಬಿಟ್ಟು ರಾಮನ ನೆನೆಯಿರೋ || ರಾಮ || 4. ಸ್ನಾನ ಸಂಧ್ಯಾ ನಿತ್ಯ ನಿಯಮ ಜಪವ ತಪವ ಮಾಡಿರೋ ನಾನು ನೀನೆಂತೆಂಬ ಮೋಹವ ಬಿಟ್ಟು ರಾಮನ ನೆನೆಯಿರೋ || ರಾಮ || 5. ಶ್ವಾಸ ಕಫ ಎರಡು ಕಂಠ ದೇಶದಲ್ಲಿ ತೊಳಲುವಾಗ ಅಲ್ಲಿ ಬಹುದೇ ಜ್ಞಾನ ನಮಗೆ ವಾಸುದೇವನ ಸ್ಮರಣೆಯೂ || || ರಾಮ || 6. ಅಂದವಾದ ದೇಹವೆಲ್ಲಾ ಬಳಲಿ ಮುರಿದು ಬೀಳುವಾಗ ಕಂಗಳಿಗೆ ಕೈ ಸೇರುವಾಗ ರಾಮ ಭಜನೆಯು ಬಾರದೈ || || ರಾಮ || 7. ತಂದೆ ತಾಯಿ ಬಂಧು ಬಳಗ ಅನಿತ್ಯ-ವೆಂದು ತಿಳಿಯಿರೋ ಸಾಯೋ ಸಂಕಟ ಬಂದರೂ ನಿಜ-ಧರ್ಮ ಬಿಡಲೂ ಬೇಡಿರೋ || || ರಾಮ || 8. ದಿವಸ ರಾತ್ರಿ ಸಾಧು ಸಜ್ಜನ ಸಂಘವನ್ನೇ ಬಯಸಿರೋ ಗುರುಗಳಪ್ಪಣೆಯಂತೆ ನೆಡದರೆ ಮುಕ್ತಿಯೆಂದು ತಿಳಿಯಿರೋ || || ರಾಮ || 9. ಬಿಡದೆ ಯಮನ ಭಟರು ಬಂದು ಹೊರಡು ಎಂದು ಮೆಟ್ಟಿ ತುಳಿದು ಹೊರಳಿ ದಾತ್ಮಾ ಸೇರುವಾಗ ರಾಮ ಭಜನೆಯು ಬಾರದೈ || || ರಾಮ || 10. ಭಕ್ತಿ ಭಾವದಿಂದ ಸದ್ಗುರು ಹರಿಯುಹರನೆಂದೆನ್ನಿರೋ ಬ್ರಹ್ಮಾನಂದರು ಸಾರಿ ಪೇಳಿದ ರಾಮ ನಾಮವ ಜಪಿಸಿರೋ ರಾಮ ರಾಮ ರಾಮ ಸೀತಾ ರಾಮ ರಾಮ ಎನ್ನಿರೋ || ರಾಮ ಸ್ಮರಣೇ ಹೊರತು ವ್ಯರ್ಥ ಕಾಲ ಕಳೆಯಬೇಡಿರೋ ||

ದಶಾವತಾರ ಸ್ತೋತ್ರಂ

ಕೋದಂಡರಾಮ ಕೋದಂಡರಾಮ| ಕೋದಂಡರಾಮ ಪಾಹಿ ಕೋದಂಡರಾಮ |ಪ| ಶ್ರೀಕರ ತ್ರಾಹಿ ಭಾಸ್ಕರ ದೇಹಿ ಲೋಕೇಶ ತ್ರಾಹಿ ಸದ್ಗುಣ ಪಾಹಿ ನೀರೊಳು ದೂರಿ ಪಾತಾಳ ಸೇರಿ ತಮನೊಳುಹೋರಿದ ಮತ್ಸಾವತಾರಿ ||1|| ನಾಕೇಶ ಬ್ರಹ್ಮ ಪ್ರಾರ್ಥಿಪೆ ನಿಮ್ಮ ಆದಿಯ ಕೂರ್ಮ ಪಾಲಿಸು ನಮ್ಮ ||2|| ಕಪಿ ರೂಪತಾಳಿ ದನುಜರ ಸೀಳಿ ಧರೆಯಮರಾಳಿ ಪೂರೆಯ ಕರ್ನಾಳಿ ||3|| ನರಹರಿ ರೂಪ ತಾಳಿ ಪ್ರತಾಪ ತೋರಿದ ಭೂಪ ಪ್ರೌಢ ಕಲಾಪ ||4|| ಬಲಿಯನು ಮೆಟ್ಟಿ ಹೃದಯವ ಕುಟ್ಟಿ ಪಾತಾಳ ಕಟ್ಟಿದ ವಾಮನ ಜೆಟ್ಟಿ ||5|| ದಶರಥ ಬಾಲಾ ದಶಶಿರ ಲೀಲಾ ದಶಮುಖ ಕಾಲಾ ದಶಾನುಕೂಲಾ ||6|| ಧಾತ್ರೀಶ ವಂಶ ಮಾಡಿದ ಧ್ವಂಸ ಮುನಿ ಕುಲ ಹಂಸ ಸತ್ಯ ಪ್ರಶಂಸ ||7|| ಗೋಕುಲ ರಕ್ಷಾ ಸುಜನ ಸಂರಕ್ಷಾ ಮಾತುಳ ಶಿಕ್ಷ ಕುಂಜದಳಾಕ್ಷಾ ||8|| ಬೆತ್ತಲೆ ನಿಂದು ಬೌದ್ಧನಿ ಬಂದು ಭಕ್ತಿಯೊಳಿಂದು ಪ್ರಾರ್ಥಿಪೆ ವೆಂದು ||9|| ಕಲ್ಯ್ಕಾವತಾರ ಕಲಿಮನ ದೂರ ದುರಿತಾಪಹಾರ ಸುಜನೋದ್ಧಾರ ||10|| ಸಾಗರ ವಾಸ ನಾಗ ಮುಖೇಶ ನುಡಿಸಿದ ಭಾಷಾ ಭಜನ ವಿಶೇಷ ||11|| ||ಸೀತಾಕಾಂತ ಸ್ಮರಣೆ ಜೈ ಜೈ ರಾಮ್ ||

ಅಖಂಡ ಭಜನೆ

1. ದಶರಥ ನಂದನ ಮೇಘ ಶ್ಯಾಮಾ. ರಘುಕುಲ ಮಂಡನ ರಾಜರಾಮ. 2. ರಾಮ ಜಯ ರಾಮ ಜಯ ರಾಮ ಜಯ ರಾಮ 3. ರಾಜೀವ ಲೋಚನ ಮೇಘಶ್ಯಾಮ. ಸೀತಾರಂಜನ ರಾಜಾರಾಮ 4. ಶ್ರೀ ರಾಮ ಜಯ ರಾಮ ಜಯ ಜಯ ರಾಮ 5. ಸೀತಾರಂಜನ ಮೇಘಶ್ಯಾಮ ಕೌಸಲ್ಯಾಸುತ ರಾಜಾ ರಾಮ 6. ರವಿವರ ಕುಲಜಾತಂ ವಂದೇ ಸುರಭೂಸುರ ಗೀತಂ 7. ಕೌಸಲ್ಯಾಸುತ ರಾಮ ಸೀತಾ ರಂಜನ ಮೇಘ-ಶ್ಯಾಮಾ 8. ದಶರಥ ನಂದನ ಮೇಘಶ್ಯಾಮ ಸೀತಾ ರಂಜನ ರಾಜಾರಾಮ 9. ವಂದೇ ರಘು ವೀರಂ ಸೀತಾ ಕಾಂತಂ ರಣಧೀರಂ 10. ಜಯ ರಾಮ ಜಯ ರಾಮ ಜಯ ಜಯ ರಾಮ 11. ಸೀತಾ ರಾಘವ ಸೀತಾ ರಾಘವ ಸೀತಾ ರಾಘವ ಸೀತಾ ರಾಘವ ಸೀತಾ ರಾಘವಾ 12. ಭಜ ಸೀತಾ ರಾಮಂ ಮಾನಸ ಭಜರಾಜ ರಾಮಂ 13. ಶ್ರೀ ಸೀತಾ ರಾಮಂ ವಂದೇ ಶ್ರೀ ರಾಜಾ ರಾಮಂ 14. ರಾವಣ ಮರ್ದನ ರಾಮ ರಾಘವ ವಾಲೀ ಮರ್ದನ ರಾಮ. 15. ಶ್ರೀ ಸೀತಾರಾಮಂ ವಂದೇ ಜಯರಾಜಾರಾಮಂ. 16. ಶ್ರೀ ಸೀತಾರಾಮಂ ಮಾನಸ ಭಜರಾಜಾ ರಾಮಂ 17. ಶ್ರೀ ಸೀತಾ ರಾಮಂ ವಂದೇ ರಾಮಂ ಜಯ ರಾಮಂ 18. ಮಾಂ ಪಾಹಿ ಅತಿದೀನಂ ರಾಘವ ತತ್ಪದ ಯುಗ ಲೀನಂ 19. ಜಯ ಜಯ ರಾಘವ ಜಯ ಜಯ ರಾಘವ 20. ಜಯ ಜಯ ರಾಘವ ಜಯ ಜಯ ರಾಘವ ಜಯ ಜಯ ರಾಘವಾ 21. ತ್ವಂಮಾಂ ಪಾಲಯ ಸೀತಾರಾಮ ತ್ವಂ ಮಾಂ ಪಾಲಯ ಸೀತಾರಾಮಾ 22. ಸೀತಾ ರಾಮ ಜಯ ಸೀತಾ ರಾಮ ಜಯ ಸೀತಾ ರಾಮ ಜಯ ಸೀತಾ ರಾಮ ಜಯ ಸೀತಾರಾಮ ಜಯಾ 23. ಶ್ರೀ ಸೀತಾ ರಾಮ ಶ್ರೀ ಸೀತಾ ರಾಮ 24. ಸೀತಾ„„ರಾಮ ಸೀತಾ„„ರಾಮ ಸೀತಾ„„ರಾಮ ಸೀತಾ„„ರಾಮ 25. ಶ್ರೀ ರಾಮ ಶ್ರೀ ರಾಮ ಶ್ರೀ ರಾಮ ಶ್ರೀ ರಾಮ 26. ರಾಮ ರಾಮ ರಾಮ ರಾಮ ರಾಮ ರಾಮ ರಾಮ 27. ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ 28. ಶ್ರೀ ರಾಮ ಜಯ ರಾಮ ಜಯ ಜಯ ರಾಮ 29. ಶ್ರೀ ಸೀತಾರಾಮಂ ರಾಘವ ಭಜ ರಾಜಾರಾಮಂ 30. ದಶರಥ ನಂದನ ರವಿಕುಲ ಭೂಷಣ ಕೌಸಲ್ಯಾ ವಿಶ್ರಾಮ 31. ಪಂಕಜ ಲೋಚನ ರಾಮ ಪಂಕಜ ಲೋಚನ ರಾಮ 32. ಪಂಚವಟೀ ಸ್ಥಿತ ರಾಮ ಜಯ ಜಯ ದಶರಥ ನಂದನ ರಾಮಾ. 33. ದಶರಥ ಸುತ ಬಾಲಂ ವಂದೇ ರಾಮಂ ಘನ ಲೀ ಲಂ. 34. ಕೋದಂಡ ಖಂಡನ ದಶಶಿರ ಮರ್ದನ ಕೌಸಲ್ಯಾ ಸುತ ರಾಮಾ ಸೀತಾ ರಂಜನ ರಾಜಾ ರಾಮ. 35. ಕೋದಂಡ ಭಂಜನ ರಾವಣ ಮರ್ದನ ಕೌಸಲ್ಯಾ ವಿಶ್ರಾಮ, ಸೀತಾ ರಂಜನ ರಾಜಾ ರಾಮಾ 36. ಕೋದಂಡ ಖಂಡನ ವಾಲೀ ತಾಡನ ಲಂಕಾ ದಾ..... ಹಾ...... ನಾ..... ಪಾಪನ ಕಾರಣ ರಾವಣ ಮರ್ದನ ರಘುಕುಲ ಭೂಷಣ ಕೌಸಲ್ಯಾ ವಿಶ್ರಾಮ, ಸೀತಾ ರಂಜನ ರಾಜಾ ರಾಮಾ 37. ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ

ನಾಮ ರಾಮಾಯಣ 

ಬಾಲ ಕಾಂಡ
ಶುದ್ಧಬ್ರಹ್ಮ ಪರಾತ್ಪರ ರಾಮ ಕಾಲಾತ್ಮಕ ಪರಮೇಶ್ವರ ರಾಮ ಶೆಷತಲ್ಪ ಸುಖ ನಿದ್ರಿತ ರಾಮ ಬ್ರಹ್ಮಾದ್ಯಮರ ಪ್ರಾರ್ಥಿತ ರಾಮ ಚಂಡಕಿರಣ ಕುಲ ಮಂಡನ ರಾಮ ಶ್ರೀ ಮದ್ದಶರಥ ನಂದನ ರಾಮ ಕೌಸಲ್ಯಾ ಸುಖ ವರ್ಧನ ರಾಮ ವಿಶ್ವಾಮಿತ್ರ ಪ್ರಿಯಧನ ರಾಮ ಘೋರ ತಾಟಕ ಘಾತಕ ರಾಮ ಮಾರಿಚಾದಿನಿ ಪಾತಕ ರಾಮ ಕೌಶಿಕ ಮಖ ಸಂರಕ್ಷಕ ರಾಮ ಶ್ರೀಮಹದಹಲ್ಯೋದ್ಧಾರಕ ರಾಮ ಗೌತಮ ಮುನಿ ಸಂಪೂಜಿತ ರಾಮ ಸುರ ಮುನಿ ವರಗಣ ಸಂಸ್ತುತ ರಾಮ ನಾವಿಕ ಧಾವಿತ ಮೃದುಪದ ರಾಮ ಮಿಥಿಲಾ ಪುರಜನ ಮೋದಿತ ರಾಮ ವಿದೇಹ ಮಾನಸ ರಂಜಕ ರಾಮ ತ್ರ್ಯಂಬಕ ಕಾರ್ಮುಕ ಭಂಜಕ ರಾಮ ಸೀತಾರ್ಪಿತವರ ಮಾಲಿಕ ರಾಮ ಕೃತ ವೈವಾಹಿಕ ಕೌತುಕ ರಾಮ ಭಾರ್ಗವ ದರ್ಪ ವಿನಾಶಕ ರಾಮ ಶ್ರೀ ಮದಯೋಧ್ಯಾ ನಂದಕ ರಾಮ
ಅಯೋಧ್ಯಾ ಕಾಂಡ
ಅಗಣಿತ ಗುಣಗಣ ಭೂಷಿತ ರಾಮ ಅವನೀ ಕಾಮಿನಿ ಕಾಮಿತ ರಾಮ ರಾಕಾ-ಚಂದ್ರ ಸಮಾನನ ರಾಮ ಪಿತೃ ವಾಕ್ಯಾಶ್ರಿತ ಕಾನನ ರಾಮ ಪ್ರಿಯ ಗುಹ ವಿನಿವೇದಿತಪದ ರಾಮ ತತ್ಷ್ಕಾಳಿತ ನಿಜಮೃದುಪದ ರಾಮ ಭರದ್ವಾಜಾದ್ರುಹ ನಂದನ ರಾಮ ಚಿತ್ರ ಕೂಟಾದ್ರಿ ನಿಕೇತನ ರಾಮ ದಶರಥ ಸಂತತ ಚಿಂತಿತ ರಾಮ ಕೈಕೆಯೀ ಸುತ ಪ್ರಾರ್ಥಿತ ರಾಮ ವಿರಚಿತ ನಿಜ ಪಿತೃ ಕರ್ಮಕ ರಾಮ ಭರತಾರ್ಪಿತ ನಿಜ ಪಾದುಕ ರಾಮ
ಅರಣ್ಯ ಕಾಂಡ
ದಂಡಕವನ ಜನ ಪಾವನ ರಾಮ ದುಷ್ಟ ವಿರಾಧ ವಿನಾಶನ ರಾಮ ಶರಭಂಗ ಸ್ತುತೀಕ್ಷ್ಣಾರ್ಚಿತ ರಾಮ ಅಗಸ್ತ್ಯಾನುಗ್ರಹ ವರ್ಧಿತ ರಾಮ ಗೃಧ್ರಾಧಿಪ ಸಂಸೇವಿತ ರಾಮ ಪಂಚವಟೀ ತಟ ಸುಸ್ಥಿತ ರಾಮ ಶೂರ್ಪನಖಾರ್ತಿ ವಿಧಾಯಕ ರಾಮ ಖರ ದೂಷಣ ಮುಖ ಭಂಜಕ ರಾಮ ಸೀತಾ ಪ್ರಿಯ ಹರಿಣಾನುಗ ರಾಮ ಮಾರೀಚಾರ್ತಿ ಕೃದಾಶುಗ ರಾಮ ವಿನಷ್ಟ ಸೀತಾನ್ವೇಷಣ ರಾಮ ಗೃಧ್ರಾಧಿಪ ಗತಿ ದಾಯಕ ರಾಮ ಶಬರೀದತ್ತ ಫಲಾಶನ ರಾಮ ಕಬಂಧ ಬಾಹುಚ್ಛೇದಕ ರಾಮ
ಕಿಷ್ಕಿಂಧಾ ಕಾಂಡ
ಹನುಮತ್ಸೇವಿತ ನಿಜಪದ ರಾಮ ದಶಸುಗ್ರೀವಾಭೀಷ್ಟದ ರಾಮ ಗರ್ವಿತ ವಾಲಿ ಸಂಹಾರಕ ರಾಮ ವಾನರ ದೂತ ಪ್ರೇಷಕ ರಾಮ ಹಿತಕರ ಲಕ್ಷ್ಮಣ ಸಂಯುತ ರಾಮ
ಸುಂದರ ಕಾಂಡ
ಕಪಿವರ ಸಂತತ ಸಂಸ್ತುತ ರಾಮ ತದ್ಗತಿ ವಿಘ್ನದ್ವಂಸಕ ರಾಮ ಸೀತಾ ಪ್ರಾಣಾಧಾರಕ ರಾಮ ದುಷ್ಟ ದಶಾನನ ದೂಷಿತ ರಾಮ ಶಿಷ್ಟ ಹನೂಮದ್ಭೂಷಿತ ರಾಮ ಸೀತೋದಿತ ಶೋಕಾವನ ರಾಮ ಕೃತ ಚೂಡಾಮಣಿ ದರ್ಶನ ರಾಮ ಕಪಿವರ ವಚನಾಶ್ವಾಸಿತ ರಾಮ
ಯುದ್ಧ ಕಾಂಡ
ರಾವಣ-ನಿಧನ ಪ್ರಸ್ಥಿತ ರಾಮ ವಾನರ ಸೈನ್ಯ ಸಮಾವೃತ ರಾಮ ಶೋಷಿತ ಶರಧೀ ಶಾರ್ಚಿತ ರಾಮ ವಿಭೀಷಣಾಭಯ-ದಾಯಕ ರಾಮ ಪರ್ವತ ಸೇತು ನಿಬಂಧಕ ರಾಮ ಘಟಕರ್ಣಶಿರಚ್ಛೇದಕ ರಾಮ ರಾಕ್ಷಸ ಕೋಟಿ ವಿಮರ್ದಕ ರಾಮ ಅಹಿಮಹಿ ರಾವಣ ಮಾರಣ ರಾಮ ಸಂಹೃತ ದಶಮುಖ ರಾವಣ ರಾಮ ವಿಧಿಭವ ಮುಖ ಸುರ ಸಂಸ್ತುತ ರಾಮ ಖಸ್ಥಿತ ದಶರಥ ವೀಕ್ಷಿತ ರಾಮ ಸೀತಾ ದರ್ಶನ ಮೋದಿತ ರಾಮ ಅಭಿಷಿಕ್ತ ವಿಭಿಷಣನುತ ರಾಮ ಪುಷ್ಪಕಯಾನಾರೋಹಣ ರಾಮ ಭರದ್ವಾಜಾದಿ ನಿಷೇವಣ ರಾಮ ಭರತ ಪ್ರಾಣನ ವಿತರಣ ರಾಮ ಸಾಕೇತ-ಪುರೀ ಭೂಷಣ ರಾಮ ಸಕಲ ಸ್ವೀಯ ಸಮಾಮೃತ ರಾಮ ರತ್ನಲಸತ್ಪೀಠಸ್ಥಿತ ರಾಮ ಪಟ್ಟಾಭಿಷೇಕಾಲಂಕೃತ ರಾಮ ಪಾರ್ಥಿವ ಕುಲ ಸನ್ಮಾನಿತ ರಾಮ ವಿಭೀಷಣಾರ್ಪಿತ ರಂಗಕ ರಾಮ ಕೀಶಕುಲಾನುಗ್ರಾಹಕ ರಾಮ ಸಕಲ ಜೀವ ಸಂರಕ್ಷಕ ರಾಮ ಸಮಸ್ತ ಲೋಕೋದ್ಧಾರಕ ರಾಮ ರಾಮ ರಾಮ ಜಯ ರಾಜಾ ರಾಮ ರಾಮ ರಾಮ ಜಯ ಸೀತಾ ರಾಮ ರಘುಪತಿ ರಾಘವ ರಾಜಾ ರಾಮ ಪತಿತ ಪಾವನ ಸೀತಾರಾಮಾ ಅಯೋದ್ಯವಾಸಿ ರಾಮ ನಮೋ ಗೋಕುಲವಾಸಿ ಕೃಷ್ಣ ನಮೋ ರಾಮನಮೋ ಕೃಷ್ಣ ನಮೋ ಹರಿ ಭಕ್ತಂತೇ ಪರಿ ಪಾಲಯ ಮಾಂ | ಮಂಗಳಂ ಜಯ ಮಂಗಳಂ ಶುಭ ಮಂಗಳಮ್ ಶ್ರೀ ರಾಮಗೇ || 1. ಭಾನುಕುಲದಲಿ ಜನಿಸಿದವಗೆ ಭಕ್ತ ಜನ ಪರಿಪಾಲಗೇ ಲೀಲೆಯಿಂದಲಿ ವಾಲಿನಿಗ್ರಹ ಮಾಡಿದಾ ಭೂಪಾಲಗೇ || ಮಂಗಳಂ ................... ಶ್ರೀ ರಾಮಗೇ || 2. ತಾಟಕಿಯ ಕೋಂದಾತಗೇ ಹೋರಾಟ-ವೀಯಲಿ ನಿಂದಗೇ ತಾಟಕೋಜ್ವಲ ಕಾಂತಿ ಶೋಭಿತ ಹೊಳೆವ ರತ್ನ ಕಿರೀಟಗೇ || ಮಂಗಳಂ ................... ಶ್ರೀ ರಾಮಗೇ || 3. ದಂಡ ಕಾರಣ್ಯಕ್ಕೆ ಪೊಗಿ ಚಂಡ ಅಸುರರ ಗೆಲಿದಗೆ, ಅಂಡ ಪಿಂಡ ಬ್ರಹ್ಮಾಂಡ ನಾಯಕ ಆದ ಕೋದಂಡ ರಾಮಗೇ || ಮಂಗಳಂ ................... ಶ್ರೀ ರಾಮಗೇ || 4. ರಾವಣಾದಿಗಳನ್ನು ಕೊಂದು ಸೀತಾಮಾತೆಯ ತಂದಗೆ ಭಕ್ತ ವತ್ಸಲ ರಾಮ ಚಂದ್ರಗೆ ಭಕ್ತ ಜನ ಪರಿ ಪಾಲಗೇ || ಮಂಗಳಂ ................... ಶ್ರೀ ರಾಮಗೇ || ಶ್ರೀ ರಾಮ ಲಾಲಿ ಸೀತಾ ರಾಮ ಲಾಲೀ ಮೇಘಶ್ಯಾಮ ಲಾಲೀ ತಾಮರಸದಳ ನಯನ ತನಯ ಲಾಲೀ || ದಶರಥ ಪುತ್ರು ಡೈ ದಾನವ ಮರ್ತೃ ಡೈ ಸೀತಾ ಪತಿ ನೀಕು ಲಾಲೀ ಚೇಸೇ ವೋ || ವಿಶ್ವಾಮಿತ್ರ ಶಿಷ್ಯುಡೈ ಧನುರ್ವೇದ ಪಾಲು-ಡೈ ಕೋದಂಡ ರಾಮ ನೀಕು ಲಾಲೀ ಚೆಸೆ ವೋ || ಆರಣ್ಯ ವಾಸುಡೈ ಭೂಮಿ ಪಾಲು ಡೈ ರಾಮ ಅಂತ ಮುದ್ದು ವೇಣು ನೀಕು ಲಾಲೀಚೆಸೇ ವೋ || ರಂಗ ಲಾಲೀ ಮಂಗಳಾಂಗ ಲಾಲೀ ರಾಮ ಗಂಗೆ ಪಡೆದ ಉತ್ತುಂಗ ಮಹಿಮ ನರಸಿಂಗ ಲಾಲೀ || ನಂದ ಲಾಲೀ ಗೋಪೀ ಕಂದ ಲಾಲೀ ರಾಮ || ಮಂದರ ಗಿರಿಧರ ಸಿಂದು ಶಯನ ಮುಕುಂದ ಲಾಲೀ || ಧೀರ ಲಾಲೀ ಅತಿ ಶೂರ ಲಾಲೀ ರಾಮ ಮಾರ ಜನಕ ಸಲಹೋ ಎನ್ನ ವಿಠಲ ಲಾಲೀ || ತಂದೇ ನೀನು ಬಂಧು ನೀನು ಬಾಂಧವಾ ನೀನೂ ರಾಮ ಬಂದು ನಿಂದು ವಂದಿಸುವೆನು ಇಂದಿರೇ ರಮಣ || ಕನಕಾದ ತೊಟ್ಟಿಲೋಳು ಇನುಕುಲೇಂದ್ರ ರಾಮ ವಿನಯದಿಂದ ಪವಡಿಸಯ್ಯ ಸುಗುಣ ಸಾಂದ್ರಾ|| ದಾನಿ ನೀನು ದೀನ ನಾನು ಧೇನು ರಕ್ಷಕಾ ರಾಮ ಮಾನದಿಂ ಪರಿಪಾಲಿಸೆಮ್ಮನು ಶ್ರೀನಿವಾಸನೇ || ಸತ್ಯ ಲಾಲೀ ಲೋಕ ಪಥ್ಯ ಲಾಲೀ ರಾಮ ಸತ್ಯಮಿಥ್ಯವೆಲ್ಲ ನಿನ್ನ ನೃತ್ಯ ಲಾಲೀ || ಅರಿಯೇನೋ ನೀನಲ್ಲದೆ ಮತ್ತನ್ಯ ದೈವವಾ ರಾಮ ಮರೆಯೇನೋ ನೀ ಮಾಡಿದಂತ ನಿತ್ಯುಪಕಾರವಾ || ರಂಗ ನಿನ್ನ ಕೊಂಡಾಡುವ ಮಂಗಳಾತ್ಮರಾ ರಾಮ || ಸಂಘ ಸುಖ-ವಿತ್ತು ಕಾಯೋ ಕರುಣಾ ಸಾಗರಾ || ಸುತ ರಾಮಾ ವಿನುತ ಶತ ಪತ್ರ ನೇತ್ರಾ ಮಿತ್ರ ವಂಶ ಜಾತನುತ ವಿಶ್ವ ವಿಖ್ಯಾತಾ || ಕಾಯೇನ ವಾಚ ಮನಸೇಂದ್ರಿಯೈರ್ವಾ ಬುಧ್ಯಾತ್ಮನಾಭ ಪ್ರಕೃತೇ: ಸ್ವಭಾವಾ ಕರೋಮಿ ಯದ್ಯತ್ ಸಕಲಂ ಪರಸ್ಮೈ: ನಾರಾಯಣಾಯೇತಿ ಸಮರ್ಪಯಾಮಿ ನಾರಾಯಣಾs ನಾರಾಯಣಾ ನಾರಾಯಣಾ ಹರಿ ನಾರಾಯಣಾ ಅಚ್ಯುತಂ ಕೇಶವಂ ರಾಮ ನಾರಾಯಣಂ ಅಚ್ಯುತಂ ಕೇಶವಂ ರಾಮ ನಾರಾಯಣಂ ಕೃಷ್ಣ ದಾಮೋದರಂ ವಾಸುದೇವಂ ಹರಿಮ್ ಶ್ರೀಧರಂ ಮಾಧವಂ ಗೋಪಿಕಾವಲ್ಲಭಂ ಶ್ರೀಧರಂ ಮಾಧವಂ ಗೋಪಿಕಾವಲ್ಲಭಂ ಜಾನಕೀ ನಾಯಕಂ ರಾಮಚಂದ್ರಂ ಭಜೆ || ತವ ಕಥಾಂಮೃತಂ... ಶ್ರವಣ ಮಂಗಲಂ... ಕರ ಚರಣ ಕೃತಮ್ ವಾಕ್ ಕಾಯಜಮ್ಕರ್ಮಜಂ ವಾ ಶ್ರವಣ ನಯನಜಂ ವಾ ಮಾನಸಂ ವಾ ಅಪರಾಧಂ ವಿಹಿತಮವಿಹಿತಂ ವಾ ಸರ್ವ ಮೇತತ್ ಕ್ಷಮಸ್ವ​ ಜಯಃ ಜಯಃ ಕರುಣಾಭ್ದೇ ಶ್ರೀ ಮಹಾದೇವ ಶಂಭೋ|| ಹರ ನಮಃ ಪಾರ್ವತೀ ಪತಯೇ ||ಹರ ಹರ ಮಹಾದೇವ ಹರ​||