ರಚನೆ:- ಶ್ರೀಮತಿ ಭಾಗ್ಯಲಕ್ಷ್ಮಿ ಕುಶಕುಮಾರ್
ಗಾಯನ : ಶ್ರೀಮತಿ ಭಾಗ್ಯಲಕ್ಷ್ಮಿ ಕುಶಕುಮಾರ್ ಮತ್ತು ಶ್ರುತಿ ಕಾರ್ತಿ
||ವಿನಾಯಕನ ಸ್ತುತಿ||
|| ಶಾರದಾ ಸ್ತುತಿ||
|| ಶ್ರೀ ರಂಗ ಸ್ಮರಣೆ||
||ಗುರು ಸ್ತುತಿ||
ರಾಗ: ಹಂಸಾನಂದಿ
ತಾಳ: ಆದಿತಾಳ
ಗುರುವೇ ನಿನ್ನಯ ಪಾದವ ನಂಬಿಹೆ
ದರುಶನ ಕೋರಿ ನಿಂದಿಹೆ ದೊರೆಯೇ||
ವಾಡೀ ಕ್ಷೇತ್ರದಿ ಔದುಂಬರದಲಿ
ಔದಾರ್ಯದಿಂದಲೀ ಅಭಯವ ನೀಡಿದೆ
ಅನುದಿನ ನಿನ್ನನೂ ಸ್ಮರಿಸುವೆ ಗುರುವೆ
ಭಕ್ತರ ಮೊರೆಯನು ಆಲಿಸು ಪ್ರಭುವೇ||೧||
ಅವತಾರ ಪುರುಷನೆ ದತ್ತ ಸ್ವರೂಪನೆ
ಕಾಷಾಂಬರ ಭಸ್ಮ ವಿಲೇಪನೇ
ದಂಡ ಕಮಂಡಲ ಪಾದುಕಾಭರಣನೆ
ತೇಜೋಮಯ ಶ್ರೀ ಯೋಗೀಶ್ವರನೇ||೨||
ನಿತ್ಯ ನಿರ್ಮಲನೆ ನಿರಾಭರಣನೆ
ನಿರ್ಗುಣ ಶಾಂತನೇ ನಿರ್ಮೋಹನೇ
ನಿಜರೋಗ ಹರನೇ ನಿರ್ವಿಕಾರನೇ
ನಿರುಪಮ ಗುಣನಿಧಿ ಸಚ್ಚಿದಾನಂದನೇ ||೩||
ದತ್ತಾತ್ರೇಯನೆ ಧ್ಯಾನ ಪ್ರದೀಪನೆ
ತಪೋನಿರತನೇ ಯೋಗ ಪ್ರತಾಪನೇ
ಶ್ರೀಪಾದ ಶ್ರೀ ವಲ್ಲಭ ರೂಪನೆ
ನರಸಿಂಹ ಸರಸ್ವತೀ ದೈವ ಸ್ವರೂಪನೇ ||೪||
ಭವರೋಗಹರನೇ ಬ್ರಹ್ಮಜ್ಞಾನಿಯೆ
ಭಕ್ತ ಜನಪ್ರಿಯ ಮೋಕ್ಷ ಕಾರಣನೇ
ಶಿವಗುರು ಸುತ ಶ್ರೀ ಶಂಕರ ರೂಪನೇ
ಚಂದ್ರಶೇಖರಾ ಭಾರತಿ ಗುರುವೇ||೫|
|| ಶಾರದಾ ಸ್ತುತಿ||
ರಾಗ: ಆರಭಿ
ತಾಳ: ಆದಿತಾಳ
ಶಾರದೇ ವರದೇ ಕೃಪಾನಿಧೇ
ಶುಭಪ್ರದೇ ನೀರದೇ
ಸರಸಿಜ ಭವನುತೆ
ಸಕಲ ಸೌಭಾಗ್ಯ ದೇ||ಪ||
ಬ್ರಹ್ಮನ ರಾಣೀ ಪುಸ್ತಕ ಪಾಣಿ
ಸುಮಧುರ ವಾಣೀ ಶ್ರೀ ಗೀರ್ವಾಣೀ
ವೀಣಾಪಾಣೀ ಸುಂದರ ವೇಣೀ
ಭಿನ್ನಯಿಸುವೆ ನಾ ಪಾವನಿ ರಮಣಿ||೧||
ಶಂಕರ ಸನ್ನುತೆ ಪರಮ ಪವಿತ್ರೆ
ವಿದ್ಯಾದೇವತೆ ವಿಮಲ ಚರಿತ್ರೆ
ವೇದ ವಿಶಾರದೆ ಶೃತಿಘನ ವಾರಿಧೆ
ಶ್ರೀಪ್ರಿಯ ಸಮ್ಮತಿ ಕರುಣಿಸು ಮಾತೆ||೨||
|| ರಾಮ ಸ್ತುತಿ||
ಶ್ರೀ ರಘುರಾಮ ಚಿರ ಸುಖಧಾಮ
ಶ್ರೀ ಪುರುಷೋತ್ತಮ ಕೌಸಲ್ಯ ರಾಮ||
ರಾಮ ರಾಮ ರಾಮ ಎನ್ನಿರೋ ಶ್ರೀ
ರಾಮ ರಾಮ ರಾಮ ಎನ್ನಿರೋ||ಪ||
ರಾಮನ ನೆನೆದರೆ ಕಷ್ಟ ಒಂದಿಷ್ಟಿಲ್ಲ
ರಘುಕುಲತಿಲಕ ನೇ ಬಾಳಿನ ಬೆಳಕೆಲ್ಲ||
ದಶರಥ ಪುತ್ರ ದಶಾವತಾರ
ದಶಶಿರ ಸಂಹಾರ ಧರಣಿಜೆ ಪಾತ್ರ
ದಯಾಂಬುಧೇ ಶ್ರೀ ಧರಣೀ ಧರವರ||೧||
ಜಗದಭಿ ರಾಮ ಸುಚರಿತ ಪ್ರೇಮ
ಅಗಣಿತ ಗುಣಗಣ ಮಂಗಳ ಧಾಮ
ಅಹಲ್ಯೋದ್ಧಾರಕ ಅಸುರ ಸಂಹಾರಕ||೨||
ರಾಧಾ ಶ್ಯಾಮ ರುಕ್ಮಿಣಿ ಪ್ರೇಮ
ಕಂಸ ಸಂಹಾರ ಕೃಷ್ಣಾವತಾರ
ರಾಜಾಧಿರಾಜ ಶ್ರೀ ರಾಜೀವ ಲೋಚನ||೩||
ಸೇತು ವಿಬಂಧಕ ಸಾಕೇತ ಬಾಲಕ
ಸಪ್ತಗಿರಿ ಪಾಲಕ ಸೀತಾ ನಾಯಕ
ಸಿರಿವಾರ ದಾಯಕ ಶ್ರೀ ರಂಗನಾಯಕ||೪||
ಯಶೋದೆಕಂದ ಯದುಕುಲಾನಂದ
ಯಮುನಾತರಂಗ ಯೋಗಾನಂದ
ವಾಸುದೇವ ಶ್ರೀ ವೈಕುಂಠ ನಾಥನೇ||೫||
ಲಕ್ಷ್ಮೀಕಾಂತ ಲಕ್ಷಣವಂತ
ಲಕ್ಷ್ಮಣಗಗ್ರಜ ರಕ್ಕಸ ಹಂತ
ಪಕ್ಷಿವಾಹನ ಶ್ರೀ ಪನ್ನಗ ಶಯನನೇ||೬||
ನವನೀತ ಚೋರ ನವಮಣಿ ಹಾರ
ಕೂರ್ಮಾವತಾರ ಕಾಕುತ್ಸಧೀರ
ಕೋಟಿಸೂರ್ಯ ನೇತ್ರ ನೀ ಕೈವಲ್ಯ ಧಾತ್ರನೀ||೭||
ಶ್ರೀ ಚಕ್ರಾಂಕಿತ ಶ್ರೀ ಕೌಸ್ತುಭಧರ
ಶ್ರೀ ಧರ ಕೇಶವ ಶ್ರೀ ತುಳಸೀಧರ
ಶ್ರೀ ಪ್ರಿಯ ರಾಘವ ಶ್ರೀ ವೆಂಕಟೇಶ್ವರ||೮||
ಪಂಕಜ ನೇತ್ರ ಪರಮ ಪವಿತ್ರ
ಪಾವನ ಚರಿತ ಪಾಂಡವ ಮಿತ್ರ
ಪರಾತ್ಪರಾ ಶ್ರೀ ಪಂಡರಿನಾಥನೆ
||೯||
ನಳಿನ ದಾಳಾಕ್ಷನೆ ನತಜನ ಪಾಲನೆ
ನೀಲ ಮೇಘ ಶ್ಯಾಮ ನೆ ನಾರಾಯಣನೇ
ನರಕಾಂತಕ ಶ್ರೀ ನರಸಿಂಹ ರೂಪನೇ||೧೦||
ಮಹಾ ವಿಷ್ಣು ನೀ ಮಧುಸೂದನೀ
ಮಾಧವ ಮೋಹನ ಮುರಳೀ ಧರನೀ
ಮಾಯಾ ಮೋಹನೀ ಮನ್ಮಥ ರೂಪನೀ||೧೧||
ಆದಿಯೂ ನೀನೇ ಅಂತ್ಯವು ನೀನೇ
ಅಣು ಅಣು ನೀನೇ ಕ್ಷಣಕ್ಷಣ ನೀನೇ
ಅಂತರಾಳದ ಓ ಆತ್ಮ ನಿಧಿಯೇ
ಆರ್ತಳ ಮೊರೆಯನು ಆಲಿಸು ಪ್ರಭುವೇ
||೧೨||